Mission
MDM
Board
Key offices
Photo Gallery
Award
Headoffice
   

ನಮ್ಮ ಪ್ರತಿಯೊಬ್ಬ ಗ್ರಾಹಕರೂ ವಿವಿಧ ಸ್ವರೂಪಗಳಲ್ಲಿ ಪರಸ್ಪರ ಭಿನ್ನರು ಎನ್ನುವುದನ್ನು ನಾವು, ಕರ್ಣಾಟಕ ಬ್ಯಾಂಕ್ ದೃಢವಾಗಿ ನಂಬಿದ್ದು, ಆದುದರಿಂದಲೇ ಗ್ರಾಹಕರ ವ್ಯವಹಾರದ ಗಾತ್ರ ಮತ್ತು ಅಪೇಕ್ಷೆಗಳ ನಡುವೆ ತಾರತಮ್ಯ ದೃಷ್ಟಿಯಿಂದ ನೋಡದೇ ಪ್ರತಿಯೊಬ್ಬ ಗ್ರಾಹಕನನ್ನು ಗೌರವಾನ್ವಿತ ಹಾಗೂ ವಿಶೇಷ ಗ್ರಾಹಕನನ್ನಾಗಿ ಪರಿಗಣಿಸುತ್ತೇವೆ. ಅಂದರೆ ನಿಮ್ಮ ವಿವಿಧ ಆಕಾಂಕ್ಷೆಗಳಿಗೆ ಬಹು ವಿಧ ಆಯ್ಕೆಯ ದ್ವಾರಾ ಸ್ಪಂದಿಸುತ್ತಾ, ಬ್ಯಾಂಕಿನ ವಿವಿಧ ಉತ್ಪನ್ನ ಮತ್ತು ಸೇವೆಗಳ ಹೊರತಾಗಿಯೂ ನೀವು ನಮ್ಮನ್ನು ಮುಖಾಮುಖಿಗೊಂಡಾಗ ಸಂಭ್ರಮಿಸುತ್ತೇವೆ. ನಿಮ್ಮ ಜೀವನಶೈಲಿಯಲ್ಲಿ ಆಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳುತ್ತಾ, ಇಂತಹ ಬದಲಾವಣೆಗಳನ್ನು ಸೂಕ್ತವಾಗಿ ಗುರುತಿಸಿ, ನಿಮಗೆ ಸಕಾಲದಲ್ಲಿ ಉತ್ತೇಜನ ನೀಡುತ್ತಾ ನಮ್ಮ ವೃತ್ತಿಪರ ಪಾರಮ್ಯ ಮತ್ತು ಸೇವಾ ಉತ್ಕೃಷ್ಟತೆಯನ್ನು ಮೆರೆಯುತ್ತೇವೆ.

ಪ್ರಮುಖ ಬ್ಯಾಂಕ್ ಆಗಿರುವ ಕರ್ಣಾಟಕ ಬ್ಯಾಂಕ್, ವ್ಯಾಪಕ ಸ್ತರದ ಗ್ರಾಹಕಸ್ನೇಹಿ ಬ್ಯಾಂಕಿಂಗ್ ಉತ್ಪನ್ನ ಮತ್ತು ವಿವಿಧ ಮಾರುಕಟ್ಟೆ, ವ್ಯಾಪಾರ ವ್ಯವಹಾರ, ಇಷ್ಟಾನಿಷ್ಟ ಮತ್ತು ವ್ಯಕ್ತಿಗತ ಸೇವೆಗಳನ್ನು ಅಭಿವೃದ್ಧಿಪಡಿಸಿದ್ದು ಸಾದರಪಡಿಸುತ್ತದೆ. ಇವುಗಳಲ್ಲಿ ಮುಖ್ಯವಾಗಿ ಮುಂಗಡ ಸೌಲಭ್ಯ, ಠೇವಣಾತಿಗಳು, ನಿಮ್ಮ ಹೆಚ್ಚುವರಿ ನಿಧಿಗೆ ಗರಿಷ್ಟ ಮರಳಿಕೆ ಅಥವಾ ಸಾಗರೋತ್ತರ ವಹಿವಾಟುಗಳನ್ನು ಬ್ಯಾಂಕು ನಿರ್ವಹಿಸುತ್ತದೆ.

ಎಲ್ಲಾ ಸ್ತರದಲ್ಲಿ ನಾವು ಗುಣಮಟ್ಟಕ್ಕೆ ವಿಶೇಷ ಪ್ರಾಮುಖ್ಯನೀಡುತ್ತೇವೆ. ನಿಮ್ಮ ಕೂಡೆ ಪರಿಣಾಮಕಾರಿ, ದೀರ್ಘಕಾಲೀನ ಮೈತ್ರಿಯನ್ನು ಬಯಸುತ್ತಾ, ಅದಕ್ಕನುಗುಣವಾಗಿ ಅತ್ಯುನ್ನತ ಮಟ್ಟದ ಅತ್ಯಾಧುನಿಕ ತಂತ್ರೋತ್ಪನ್ನ ಸೇವೆ ಹಾಗೂ ಬ್ಯಾಂಕಿಂಗ್ ಉತ್ಪನ್ನಗಳನ್ನು ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಿದ್ದೇವೆ. ಎಲ್ಲಕ್ಕಿಂತ ಮಿಗಿಲಾಗಿ, ನಮ್ಮ ತಾಂತ್ರಿಕತೆಯ ಔನ್ನತ್ಯವು ಇಂದಿನ ಹಾಗೂ ನಿಮ್ಮ ಭವಿಷ್ಯದ ಆಶಯಗಳನ್ನೂ ಪೂರೈಸುವಲ್ಲಿ ಸಶಕ್ತವಾಗಿದೆ.

   ©2003 ಕರ್ಣಾಟಕ ಬ್ಯಾಂಕ್