|
ಬ್ಯಾಂಕು ತನ್ನ
ವ್ಯವಹಾರ ವಿಸ್ತರಣೆಯನ್ನು
ಹೆಚ್ಚುತ್ತಿರುವ
ಶಾಖೆಗಳೊಂದಿಗಷ್ಟೇ
ವಿಸ್ತರಿಸುವುದರೊಂದಿಗೇ,
ಆಧುನಿಕ ಬ್ಯಾಂಕಿಂಗ್
ಸೇವಾಜಾಲವಾದ
ಎ. ಟಿ. ಎಂ.(ATM)
ಮತ್ತು ಡೆಬಿಟ್ಕಾರ್ಡ್
ದ್ವಾರಾ ಗ್ರಾಹಕರಿಗೆ
ಅತ್ಯುನ್ನತ ಸೇವೆಯನ್ನು
ಒದಗಿಸುತ್ತದೆ.
ಪ್ರಸ್ತುತ ಬ್ಯಾಂಕು 267ಕ್ಕೂ ಆಧಿಕ
ಸ್ವಂತ ಎ. ಟಿ.
ಎಂ.(ATM)
ಕೇಂದ್ರಗಳನ್ನು
ಹೊಂದಿದ್ದು ನ್ಯಾಷನಲ್
ಫೈನಾನ್ಸಿಯಲ್
ಸ್ವಿಚ್, ಕ್ಯಾಶ್
ಟ್ರೀ ಮತ್ತು
ವೀಸಾ ದೊಂದಿಗೆ
ಮಾಡಿಕೊಂಡ ಎ.
ಟಿ. ಎಂ. (ATM)
ಅನುಬಂಧಗಳಿಂದಾಗಿ,
ಬ್ಯಾಂಕಿನ ಗ್ರಾಹಕರಿಗೆ
ಆಭೂತಪೂರ್ವ ವ್ಯಾಪಕತೆ
ದೊರಕಿದೆ. ಬ್ಯಾಂಕಿನ
ಡೆಬಿಟ್ ಕಾರ್ಡ್ದಾರರು
ನಿಜಕ್ಕೂ ತಮ್ಮ
ಜೇಬಿನಲ್ಲೇ ಬ್ಯಾಂಕಿಂಗ್
ವ್ಯವಹಾರವನ್ನು
ಕೊಂಡೊಯ್ಯಲು
ಸಾಧ್ಯವಾಗಿದೆ.
ಎನ್ ಎಫ್ ಎಸ್(NFS)
ನ 73,823ಕ್ಕೂ
ಅಧಿಕ, ಕ್ಯಾಶ್
ಟ್ರೀ ಯ 7,400ಕ್ಕೂ
ಅಧಿಕ ಅಲ್ಲದೇ
ವೀಸಾದ 1.2 ಮಿಲಿಯನ್ಗೂ
ಅಧಿಕ ಎ. ಟಿ.
ಎಂ. (ATM)
ಕೇಂದ್ರಗಳಲ್ಲಿ
ಮತ್ತು ವಿಶ್ವದ್ಯಾಂತ 29 ಮಿಲಿಯನ್
ವ್ಯವಹಾರ ಕೇಂದ್ರಗಳಲ್ಲಿ
ಡೆಬಿಟ್ ಕಾರ್ಡ್
ಸೇವಾ ಬಳಕೆಯ
ಅರ್ಹತೆ ಗ್ರಾಹಕರಿಗೆ ದೊರಕಿದೆ.
|