ಆಕರ್ಷಕ ಠೇವಣಿ
ಯೋಜನೆಗಳು
ಬ್ಯಾಂಕಿನ ಆತ್ಯಾಕರ್ಷಕ
ಠೇವಣಿ ಯೋಜನೆಗಳು
ಬಹಳ ಜನಪ್ರಿಯವಾಗಿದೆ.
ಗ್ರಾಹಕ ಸ್ನೇಹಿ
ನಿರಖು ಠೇವಣಿ
ಖಾತೆ , ಬಡ್ಡಿಯ
ಮೇಲೆ ಬಡ್ಡಿಗಳಿಸುವ
ಅಭ್ಯುದಯ ಕ್ಯಾಶ್
ಸರ್ಟಿಫಿಕೇಟ್,
ನಿಶ್ಚಿತ ಮಾಸಿಕ
ಕಂತಿನ ಕ್ಯುಮಿಲೆಟೀವ್
ಡೆಪಾಸಿಟ್ ಬಹು
ಜನಪ್ರಿಯವಾಗಿವೆ.
'ಸೌಲಭ್ಯಠೇವಣಿ ಖಾತೆ 'ಯು ಗ್ರಾಹಕರಿಗೆ
ದ್ವಿವಿಧ ಆಯ್ಕೆಯನ್ನು
ನೀಡುತ್ತದೆ.
ಅಧಿಕ ಇಳುವರಿ
ಮತ್ತು ಅಗತ್ಯಕ್ಕೆ
ಅನುಗುಣವಾಗಿ
ನಿರ್ದಿಷ್ಟ ಅಂಶಗಳನ್ನು
ಇಲ್ಲಿ ಹಿಂಪಡೆಯಲು
ಸಾಧ್ಯ.
ಹಿರಿಯ ನಾಗರಿಕರಿಗಾಗಿ
ಹಿರಿಯ ನಾಗರಿಕರಿಗಾಗಿ
ಇರುವ ವಿಶೇಷ
ಠೇವಣಿ ಯೋಜನೆಗಳು
ಹೆಚ್ಚುವರಿ ಬಡ್ಡಿದರಗಳನ್ನು
ನೀಡುವುದರೊಂದಿಗೆ
ಇತರ ಸವಲತ್ತುಗಳಾದ,
ಕಡಿತವಿಲ್ಲದೇ
ಠೇವಣಿಗಳ ಮೇಲೆ
ಮಾಸಿಕ ಬಡ್ಡಿ
ಪಾವತಿ, ಮಾಹೆಯಾನ
ಎರಡು ಶುಲ್ಕ
ರಹಿತ ಹಣರವಾನೆ/ಡ್ರಾಫ್ಟ್
ಖರೀದಿ, ರೂ15,000/- ತನಕ
ಸ್ಥಳೀಯ/ಪರಸ್ಥಳದ
ಚೆಕ್ಗಳ ತತ್ಕ್ಷಣ
ಜಮೆ ಮತ್ತು ಉಳಿತಾಯ
ಖಾತೆಗೆ ಜಂಟಿಯಾದ
ವಿಮಾ ಸೌಲಭ್ಯದಿಂದಾಗಿ,
ಆಸ್ಪತ್ರೆ ಸೇರಿದ
ಖರ್ಚುಗಳಿಂದ
ರಕ್ಷಣೆ ಮತ್ತು
ಆಕಸ್ಮಿಕ ಅವಘಡಗಳ
ಸಂದರ್ಭಗಳಲ್ಲಿನ
ಖರ್ಚುಗಳ ಮರುಭರ್ತಿ
ಸಾಧ್ಯವಾಗುತ್ತದೆ.
ಪ್ರಸ್ತುತ ಹಿರಿಯ
ನಾಗರಿಕರಿಗೆ
ನಿರಖು ಠೇವಣಿ
ಮತ್ತು ಅಭ್ಯುದಯ
ಕ್ಯಾಶ್ ಸರ್ಟಿಫಿಕೇಟ್
ಠೇವಣಿಗಳ
ಮೇಲೆ ಶೇ 0.50
ವಿಶೇಷ ಹೆಚ್ಚುವರಿ
ಬಡ್ಡಿದರ, ಲಭ್ಯವಿದೆ.
|