ತ್ವರಿತ ಹಣ ವರ್ಗಾವಣೆಗಾಗಿ
ವೆಸ್ಟರ್ನ್ ಯೂನಿಯನ್
ಫೈನಾನ್ಸಿಯಲ್
ಸರ್ವೀಸಸ್ ಲಿಮಿಟೆಡ್
ನೊಂದಿಗೆ ಬ್ಯಾಂಕು
ಒಪ್ಪಂದ ಮಾಡಿಕೊಂಡಿದ್ದು,
ಇದರಿಂದಾಗಿ ವಿದೇಶಗಳಿಂದ
ಬರುವ ನಿಧಿ ವರ್ಗಾವಣೆಯು
ಕ್ಷಿಪ್ರ ಹಾಗೂ
ಸುರಕ್ಷಿತವಾಗಿ
ಪಾವತಿಗೊಳ್ಳುತ್ತಿದೆ.
ಈ ಒಪ್ಪಂದಗಳಿಂದಾಗಿ
ಗ್ರಾಹಕರಿಗೆ,
ವಿಶ್ವಾದ್ಯಂತದಿಂದ
ಬರುವ ಹಣ ರವಾನೆಯ
ಪಾವತಿಗಾಗಿ ಶಾಖಾ
ಅಯ್ಕೆಯ ಸಂಖ್ಯೆಗಳ
ವೈಶಾಲ್ಯದಿಂದಾಗಿ,
ಹಣ ರವಾನೆಯ ತತ್ಕ್ಷಣದಿಂದಲ್ಲೇ
ಪಾವತಿ ಪಡೆಯಲು
ಸಾಧ್ಯವಾಗುತ್ತಿದೆ.
ಆರ್. ಟಿ. ಜಿ.
ಎಸ್. (RTGS)
ಅಂತೆಯೇ ಎನ್.
ಇ. ಎಫ್. ಟಿ.
(NEFT)
ಸೇವಾ ಸೌಲಭ್ಯ
ಮೊದಲು ವಿಸ್ತರಿಸಿದ
ಕೆಲವೇ ಬ್ಯಾಂಕುಗಳಲ್ಲಿ
ಕರ್ಣಾಟಕ ಬ್ಯಾಂಕು
ಒಂದಾಗಿದ್ದು,
ಈ ಸೇವೆಗಳು ಮನಿಕ್ಲಿಕ್
ಆಂತರ್ಜಾಲ ಬ್ಯಾಂಕಿಂಗ್
ಸೇವೆಯೊಂದಿಗೆ
ಸಂಕೀರ್ಣಗೊಂಡಿದ್ದು
ಈ ಸೇವೆಗಳು ದಿನದ
24 ಗಂಟೆಗಳು
ಹಾಗೂ ವಾರದ 7
ದಿನಗಳಲ್ಲೂ ಗ್ರಾಹಕರಿಗೆ
ಲಭ್ಯವಿದೆ.
|