<%@ page contentType="text/html; charset=iso-8859-1" language="java"%> Multibranch Banking - Karnataka Bank Ltd.
   
ಮಲ್ಟಿಬ್ರಾಂಚ್ ಬ್ಯಾಂಕಿಂಗ್, ಒಂದು ಗ್ರಾಹಕ ಸ್ನೇಹಿ ಆವಿಷ್ಕಾರವಾಗಿದ್ದು ಇದರಿಂದಾಗಿ ಬಹು ಶಾಖೆಗಳ ದ್ವಾರಾ ಗ್ರಾಹಕರಿಗೆ, ಚೆಕ್ ಬಳಸಿ ಹಿಂಪಡೆತ/ವ್ಯವಹಾರ ಸಾಧ್ಯತೆ ದೊರಕುತ್ತದೆ.

ಗ್ರಾಹಕ ಕೇಂದ್ರಿತ ಅಭಿಗಮನದ ದ್ಯೋತಕವಾಗಿ ಬ್ಯಾಂಕು ತನ್ನ ಚಾಲ್ತಿ ಖಾತೆಯ ಗ್ರಾಹಕರಿಗೆ ತಂತ್ರಜ್ಞಾನಾವೃತ ಸೇವೆಗಳಾದ ಬಹುಶಾಖಾ ಬ್ಯಾಂಕಿಂಗ್ ಸೌಲಭ್ಯ (MBB) ಮತ್ತು ತತ್‌ಕ್ಷಣ ಪಾವತಿಯ ಬಹುನಗರಿ ಚೆಕ್ ಸೌಲಭ್ಯವನ್ನು ವಿಸ್ತರಿಸಿದೆ. ಪ್ರಸ್ತುತ ನೆಟ್‌ವರ್ಕ್‌ಗೆ ಅಳವಡಿಸಲ್ಪಟ್ಟ ಎಲ್ಲಾ ಶಾಖೆಗಳಲ್ಲೂ ಖಾತೆ ತೆರೆಯುವ ಅವಕಾಶವಿರುತ್ತದೆ. ವಿಶೇಷ ವಿನ್ಯಾಸ ರೂಪಿತ ಚೆಕ್‌ಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಚಾಲ್ತೀ ಖಾತೆಯ ಗ್ರಾಹಕರ ಬೇಡಿಕೆಗನುಗುಣವಾಗಿ ವೈಯುಕ್ತಿಕ ನಾಮ ಮುದ್ರಿತ ಚೆಕ್ ಪುಸ್ತಕ ಹಾಗೂ ವಿನ್ಯಾಸದ ನಿರಂತರತೆಯನ್ನೂ ಬ್ಯಾಂಕು ಪೂರೈಸಬಲ್ಲದು. ಬಹುಶಾಖಾ ಬ್ಯಾಂಕಿಂಗ್ (MBB) ಯೋಜನೆಯನ್ವಯ, ಖಾತೆ ಹೊಂದಿರುವ ಶಾಖೆಯಿಂದ ಹೊರತಾದ ಅನ್ಯ ಶಾಖೆಗಳಿಂದಲೂ,ಸ್ವಂತಕ್ಕಾಗಿ ಒಂದು ಪರಿಮಿತಿಯ ತನಕ ಹಣದ ಹಿಂಪಡೆತವೂ ಸಾಧ್ಯ.

   ©2003 ಕರ್ಣಾಟಕ ಬ್ಯಾಂಕ್