|
ಅನಿವಾಸಿ ಭಾರತೀಯರಿಗಾಗಿ
ಅನೇಕ ಠೇವಣಿ ಸೌಲಭ್ಯಗಳು ಲಭ್ಯವಿದೆ.
ಇವುಗಳಲ್ಲಿ ಅನಿವಾಸಿ
(ರೂಪಾಯಿ) ಖಾತೆ
(NRE), ವಿದೇಶಿ
ಕರೆನ್ಸಿ ಅನಿವಾಸಿ
ಖಾತೆ (ಬ್ಯಾಂಕ್)
[FCNR(B)]
ಮತ್ತು ಅನಿವಾಸಿ
(ಸಾಮಾನ್ಯ) ಖಾತೆ
(NRO)ಗಳು ಆಕರ್ಷಕ
ಮತ್ತು ಸ್ಪರ್ಧಾತ್ಮಕ
ಬಡ್ಡಿದರ ಕೊಡುಗೆಯೊಂದಿಗೆ
ಚಾಲ್ತಿಯಲ್ಲಿದೆ.
ನಿವಾಸಿ ವಿದೇಶಿ
ಕರೆನ್ಸಿ (RFC)
ಖಾತೆ, ವಿದೇಶದಿಂದ ಹಿಂತಿರುಗುವ
ನಿರ್ಣಯದಲ್ಲಿರುವ
ಭಾರತೀಯರಿಗೆ
ಬ್ಯಾಂಕಿನ ಕೊಡುಗೆ.
ಅದಲ್ಲದೇ ನಿವಾಸಿ
ವಿದೇಶಿ ಕರೆನ್ಸಿ
(ದೇಶೀಯ) ಖಾತೆ
ಸಹ ವಿದೇಶಗಳಿಂದ
ಮರಳಲಿಚ್ಛಿಸುವವರಿಗೆ
ವರದಾನವಾಗಿದೆ.
ತಮ್ಮ ಠೇವಣಿಗಳ
ಮೇಲೆ ಸಾಲ ಲಭ್ಯತೆಯ
ಹೊರತಾಗಿಯೂ,
ಅನಿವಾಸಿ ಭಾರತೀಯರ
ಅಗತ್ಯ - ಅನುಕೂಲಕ್ಕನುಗುಣವಾಗಿ
ಸ್ವಂತ ಮನೆ ಹೊಂದಲು
ಗೃಹಸಾಲ ಸೌಲಭ್ಯ,
ದಿನಂಪ್ರತಿ ಶಿಲ್ಕು
ಇಳಿಮುಖದ ಮೇಲಣ
ಕನಿಷ್ಠ ಬಡ್ಡಿದರದಲ್ಲಿ
ಲಭ್ಯವಿದೆ.
ಅಂತಾರಾಷ್ಟ್ರೀಯ
ಒಳನೋಟ
ಅಂತಾರಾಷ್ಟ್ರೀಯ
ಉದ್ಯಮರಂಗದಲ್ಲೂ
ಬ್ಯಾಂಕು ಪ್ರಗತಿಯ
ವೇಗೋತ್ಕರ್ಷವನ್ನು
ಹೊಂದಿದೆ. ವಿದೇಶಿ
ವಿನಿಮಯ ವ್ಯವಹಾರಕ್ಕಾಗಿ
ಪ್ರಮುಖ ಕೇಂದ್ರಗಳಲ್ಲಿ
ಬ್ಯಾಂಕಿನ 14
ನಾಮಾಂಕಿತ ಶಾಖೆಗಳು
ಕಾರ್ಯನಿರ್ವಹಿಸುತ್ತಿವೆ.
ಬ್ಯಾಂಕಿನ ವ್ಯಾಪಕ
ಶಾಖಾ ಕಾರ್ಯಜಾಲತ್ವ,
ಪ್ರಗತಿಶೀಲ ರಾಷ್ಟ್ರವ್ಯಾಪಿ
ಕಾರ್ಯಜಾಲತ್ವ
ಹೊಂದಿರುವ ಬ್ಯಾಂಕ್
ಎನ್ನುವ ಬ್ಯಾಂಕಿನ
ಧ್ಯೇಯವಾಕ್ಯಕ್ಕೆ
ಅನುಗುಣವಾಗಿದೆ.
ಬ್ಯಾಂಕಿನ ಅತ್ಯುತ್ತಮ
ಆಡಳಿತವು ಸುರಕ್ಷಿತತೆ
ಮತ್ತು ದೃಢತೆಯ
ಸಂಕೇತವಾಗಿದೆ.
ವಿದೇಶಿ ಚೆಕ್,
ಡಿ.ಡಿ. ಮುಂತಾದವುಗಳ
ಸಂಗ್ರಹಕ್ಕಾಗಿ
ಬ್ಯಾಂಕು ದೇಶವ್ಯಾಪಿ
ಬಹಳಷ್ಟು ಶಾಖೆಗಳನ್ನು
ಫಾರೆಕ್ಸ್ ಬ್ಯೂರೋ
ಶಾಖೆಗಳು ಎಂದು
ವಿಶೇಷವಾಗಿ ಗುರುತಿಸಿ,
ಈ ವ್ಯವಹಾರಕ್ಕೆ
ವೇಗೋತ್ಕರ್ಷ
ನೀಡಿದೆ. ವೆಸ್ಟರ್ನ್
ಯೂನಿಯನ್ ಫೈನಾನ್ಸಿಯಲ್
ಸರ್ವೀಸಸ್ ಲಿಮಿಟೆಡ್
ಸಂಸ್ಥೆ ಒಂದಿಗೆ
ಮಾಡಿಕೊಂಡ ಅನುಬಂಧದಿಂದಾಗಿ
ಹಣ ರವಾನೆಯ ಒಳಹರಿವಿನಲ್ಲಿ
ಸುರಕ್ಷಿತತೆ
ಮತ್ತು ತ್ವರಿತತೆ
ಕಾಯ್ದುಕೊಳ್ಳಲಾಗಿದೆ.
ದ್ವಿಮುಖ ತ್ವರಿತ
ನಿಧಿರವಾನೆಗಾಗಿ
ಬ್ಯಾಂಕು SWIFTನ
ಸದಸ್ಯತ್ವ ಹೊಂದಿರುವುದು,
ಗ್ರಾಹಕರಿಗೆ ವಿಶೇಷ ಸೌಲಭ್ಯವಾಗಿದೆ.
ಬ್ರಿಟಿಷ್ ಬ್ಯಾಂಕ್
ಆಫ್ ಮಿಡಲ್ ಈಸ್ಟ್
ಮತ್ತು ಎಮಿರೇಟ್ಸ್
ಬ್ಯಾಂಕ್ ಇಂಟರ್ನ್ಯಾಷನಲ್
ಲಿ., ದುಬೈ,
ಯುನೈಟೆಡ್ ಅರಬ್
ಎಮಿರೇಟ್ಸ್ ಮತ್ತು
ಬಾಹರೈನನ ಇಂಟರ್ನ್ಯಾಷನಲ್
ಬ್ಯಾಂಕ್ ಮುಂತಾದ
43 ದೇಶಗಳ ಪ್ರಮುಖ
ಬ್ಯಾಂಕ್ಗಳೊಂದಿಗೆ
ವ್ಯವಹಾರ ಸಂಬಂಧ
ಹೊಂದಿರುವುದು
ಗ್ರಾಹಕರಿಗೆ
ವಿಶ್ವಾದ್ಯಂತ
ವ್ಯಾಪಾರ ವ್ಯವಹಾರ
ಸಾಧ್ಯತೆಯನ್ನು
ಒದಗಿಸುತ್ತಿದೆ.
ಮಧ್ಯ ಪ್ರಾಚ್ಯ
ದೇಶಗಳಲ್ಲಿನ
ಆನಿವಾಸಿ ಭಾರತೀಯರಿಗೆ
ಮತ್ತು ಭಾರತದ
ಹಜ್ ಯಾತ್ರಿಗಳಿಗೆ
ಅನುಕೂಲ ಕಲ್ಪಿಸುವರೇ
ಬ್ಯಾಂಕು,ಸೌದಿ
ಅರೇಬಿಯಾದ ಸೌದಿ
ಹೊಲಾಂಡಿ ಬ್ಯಾಂಕ್ನಲ್ಲಿ
ಸೌದಿ ರಿಯಾಲ್
ಕರೆನ್ಸಿಯ ನೋಸ್ಟ್ರೋ
ಖಾತೆಯನ್ನು ಹೊಂದಿದೆ.
ಇವೆಲ್ಲಾ ಸೇವೆಗಳು
ಭಾರತದಲ್ಲಷ್ಟೇ
ಅಲ್ಲ ವಿದೇಶಗಳಲ್ಲೂ
ಬ್ಯಾಂಕು ಗ್ರಾಹಕ
ಕೇಂದ್ರಿತ ಸೇವೆಗೆ
ಮುಡಿಪಾಗಿದೆ
ಎನ್ನುವುದನ್ನು
ಶ್ರುತಗೊಳಿಸುತ್ತದೆ.
|